19, 3rd Cross , Mission Road, C. S. I. Compound, Bengaluru, Karnataka.

ಹೊಸಗನ್ನಡದ ಆರಂಭದಲ್ಲಿ ಕನ್ನಡ ಜಗತ್ತಿಗೆ ಅನಾವರಣಗೊಳ್ಳದ ಅನೇಕ ಸಂಗತಿಗಳನ್ನು

ಶ್ರುತಪಡಿಸಿದ ಡಾ. ಜಿ.ಎನ್. ಉಪಾಧ್ಯ ಅವರು ಉಪನ್ಯಾಸ ಎಲ್ಲ ಅಧ್ಯಾಪಕ ಬಂಧುಗಳಿಗೆ ತುಂಬ ಉಪಯುಕ್ತವಾಗಿದ್ದಿತು. ಕನ್ನಡದ ಅಭಿವೃದ್ಧಿ ಯಲ್ಲಿ ಮುಂಬೈ, ಮಂಗಳೂರು, ಧಾರವಾಡ, ಮೈಸೂರು -ಈ ನಾಲ್ಕು ಪ್ರಾಂತ್ಯಗಳ ಕೊಡುಗೆ, ವಿದೇಶಿ ವಿದ್ವಾಂಸರು ಕನ್ನಡದ ಚೆಲುವನ್ನು ಅರಿತು ,ಆಸ್ವಾದಿಸಿ ಅಜರಾಮರಗೊಳಿಸಿದ ಬಗೆ ನಿಜಕ್ಕೂ ಪ್ರಾತಃ ಸ್ಮರಣೀಯವಾದುದು. ಪ್ರತಿಯೊಬ್ಬ ಕನ್ನಡಿಗನೂ ನೆನೆಯಲೇ ಬೇಕಾದ ಕಾರ್ಯಗಳನ್ನು ಮಾಡಿ ಕನ್ನಡ ಭಾಷಾ ವೃಕ್ಷದ ಬೇರುಗಳನ್ನು ಗಟ್ಟಿ ಗೊಳಿಸಿದ ರೈಸ್ ಸಹೋದರರ ಸಾಧನೆ ಗಳನ್ನು ಸ್ಮರಣೆಗೆ ತಂದುಕೊಟ್ಟ ಶ್ರೀ ಉಪಾಧ್ಯ ಅವರಿಗೆ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜಿನ ಸೃಜನ ಕನ್ನಡ ಸಂಘದ ಪರವಾಗಿ ತುಂಬು ಕೃತಜ್ಞತೆಗಳು. ಕನ್ನಡವನ್ನು ಕಟ್ಟಿ ಬೆಳೆಸಿದ ಆ ಎಲ್ಲ ಮಹನೀಯರ ನೆನಪು ಮಾಡಿಕೊಳ್ಳುತ್ತಾ ಪ್ರ ಸ್ತುತ ಪಡಿಸಿದ ಗಾಯನ ಔಚಿತ್ಯ ಪೂರ್ಣವಾಗಿದ್ದಿತು . ಶ್ರೀಮತಿ ಶ್ಯಾಮಲಾ ರಾಧೇಶ್ ಅವರಿಗೆ ವಿಭಾಗದ ಪರವಾಗಿ ಧನ್ಯವಾದಗಳು. ಈ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ೨ಂ೫ ಮಂದಿ ಅಧ್ಯಾಪಕ ಬಂಧುಗಳಿಗೆ ವಿಭಾಗದ ಪರವಾಗಿ ಧನ್ಯವಾದಗಳು